ಅಕ್ಷಪಾದ 
ಕಾಲಿನಲ್ಲಿ ಕಣ್ಣುಳ್ಳ ಗೌತಮ ಋಷಿ. ನ್ಯಾಯಶಾಸ್ತ್ರದ ಮೂಲಪುರುಷ. ನ್ಯಾಯಸೂತ್ರಗಳನ್ನು ರಚಿಸಿದವ. ತನ್ನ ಮತವನ್ನು ದೂಷಿಸಿದ ವ್ಯಾಸನನ್ನು ಕಣ್ಣಿನಿಂದ ನೋಡುವುದಿಲ್ಲವೆಂದು ಶಪಥಮಾಡಿ ಕಾಲಾಂತರದಲ್ಲಿ ವಿವೇಕ ಮೂಡಿಬರಲು ಪ್ರತಿಜ್ಞಾಭಂಗವಾಗದಂತೆ ಕಾಲಿನಲ್ಲೇ ಹೊಸದಾಗಿ ಕಣ್ಣನ್ನು ಸೃಷ್ಟಿಸಿಕೊಂಡು ಅದರಿಂದ ವ್ಯಾಸನನ್ನು ನೋಡಿದವ.				       

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ